Posts

Showing posts from July, 2022

ಅಲ್ಯೂಮಿನಿಯಂ ಏಣಿ (aluminium ladder) 5 ವರ್ಷಕ್ಕಿಂತ ಹಳತು ನಿಮ್ಮಲ್ಲಿ ಇದ್ರೆ. ಈ ಲೇಖನ ತಪ್ಪದೆ ಓದಿ?!

Image
  ಅಲ್ಯೂಮಿನಿಯಂ ಏಣಿ  ಅಂದಾಜು 7 ವರ್ಷದ ಹಿಂದೆ ಉಪ್ಪಿನಂಗಡಿಯ(skads) ಪ್ರತಿಷ್ಠಿತ ಅಂಗಡಿಯಿಂದ ಆವಾಗಿನ ಪ್ರತಿಷ್ಠಿತ ಕಂಪನಿಯ ಏಣಿ(veenu ladders) (20ft+10ft). ಇದ್ರಲ್ಲಿ 2 ರೀತಿಯ ಏಣಿ ಇದೆ.ನಮ್ಮಲ್ಲಿನ ಏಣಿ 2.5ಇಂಚ್ ನ ಅಲ್ಯೂಮಿನಿಯಂ ಪೈಪ್ ಗೆ 1 inch ಚೌಕಾಕಾರದ hole ಮಾಡಿ ಅದರೊಳಗೆ ಅರ್ಧ ಫೀಟ್ ನ ಸ್ಟೆಪ್ ಅನ್ನು ತೂರಿಸಿ ಪೈಪ್ ನ ಹೊರಬಂದ step ನ ಅರ್ಧ ಇಂಚು ಭಾಗವನ್ನು ಅಲ್ಲಿಗೆ ಬೆಂಡ್ ಮಾಡಿ ಬಿಡುವುದು. ಈ ಏಣಿ ಯಲ್ಲಿ ಎಲ್ಲರಂತೆ ಕಾಳು ಮೆಣಸು, ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡ ಣೆ ಗೇ ಬಳಸುತ್ತಿದ್ದೆವು... ನಂತರ ಅದನ್ನು ನೀರು ಬಿಸಿಲು ಬೀಳದಂತೆ shade ಇರುವ ಜಾಗದಲ್ಲಿ ಇಡುತ್ತಿದ್ದೆವು . ಒಂದೆರಡು ವರ್ಷದಿಂದೀಚೆಗೆ ಅದನ್ನು ತೋಟದಲ್ಲಿಯೇ shade ಇರುವ ಜಾಗದಲ್ಲಿಯೇ ಇಟ್ಟು. ಬೇಕಾದ ಹಾಗೆ ಅದನ್ನು ಬಳಸಿ ಮತ್ತೆ ಪುನಃ ನೇರವಾಗಿ ಅಲ್ಲಿಯೇ ಮರಕ್ಕೆ ಕಟ್ಟಿ ಇಟ್ಟು ಬಿಡುತ್ತಿದ್ದೆವು. ಈ ಬಾರಿ ಬೋರ್ಡೋ ದ್ರಾವಣ ಬಿಡಲು ಪ್ರತೀ ಬಾರಿಯಂತೆ ಈ ಬಾರಿಯೂ ಬೆಳಿಗ್ಗೆ ತೆಗೆದೆವು, ಸಂಜೆಯವರೆಗೂ ಈ ಏಣಿಯಲ್ಲಿ ನಿಂತು ಔಷದಿ ಸಿಂಪಡಣೆ ಮಾಡುತ್ತಿದ್ದೆವು. ಆದ್ರೆ ಈ ಭಾರಿ ಅಂದಾಜು 4 ಗಂಟೆಯ ಸಮಯ ದಲ್ಲಿ ಒಂದು ಅವಘಡ ಸಂಭವಿಸಿತು.18 ವರ್ಷಗಳಿಂದ ಬೋರ್ಡೋ ಸಿಂಪಡಣೆ, ಅಡಿಕೆ ಕೊಯ್ಲು, ತೆಂಗಿನಕಾಯಿ ಕೊಯ್ಲು ಮಾಡುತ್ತಿದ್ದ ನಮ್ಮ ಕೆಲಸದವ(ಹೆಸರು ಕೆಂಪಯ್ಯ) ಈ 20ft ಏಣಿಯ ಮೇಲಿನ ಮೊದಲನೇ ಸ್ಟೆಪ್ ತುಂಡಾಗಿ 3 ಸ್ಟೆಪ್ ಕೆಳಗೆ ಬಂದ...