 |
ಅಲ್ಯೂಮಿನಿಯಂ ಏಣಿ |
ಅಂದಾಜು 7 ವರ್ಷದ ಹಿಂದೆ ಉಪ್ಪಿನಂಗಡಿಯ(skads) ಪ್ರತಿಷ್ಠಿತ ಅಂಗಡಿಯಿಂದ ಆವಾಗಿನ ಪ್ರತಿಷ್ಠಿತ ಕಂಪನಿಯ ಏಣಿ(veenu ladders) (20ft+10ft). ಇದ್ರಲ್ಲಿ 2 ರೀತಿಯ ಏಣಿ ಇದೆ.ನಮ್ಮಲ್ಲಿನ ಏಣಿ 2.5ಇಂಚ್ ನ ಅಲ್ಯೂಮಿನಿಯಂ ಪೈಪ್ ಗೆ 1 inch ಚೌಕಾಕಾರದ hole ಮಾಡಿ ಅದರೊಳಗೆ ಅರ್ಧ ಫೀಟ್ ನ ಸ್ಟೆಪ್ ಅನ್ನು ತೂರಿಸಿ ಪೈಪ್ ನ ಹೊರಬಂದ step ನ ಅರ್ಧ ಇಂಚು ಭಾಗವನ್ನು ಅಲ್ಲಿಗೆ ಬೆಂಡ್ ಮಾಡಿ ಬಿಡುವುದು. ಈ ಏಣಿ ಯಲ್ಲಿ ಎಲ್ಲರಂತೆ ಕಾಳು ಮೆಣಸು, ಅಡಿಕೆಗೆ ಬೋರ್ಡೋ ದ್ರಾವಣ ಸಿಂಪಡ ಣೆ ಗೇ ಬಳಸುತ್ತಿದ್ದೆವು... ನಂತರ ಅದನ್ನು ನೀರು ಬಿಸಿಲು ಬೀಳದಂತೆ shade ಇರುವ ಜಾಗದಲ್ಲಿ ಇಡುತ್ತಿದ್ದೆವು . ಒಂದೆರಡು ವರ್ಷದಿಂದೀಚೆಗೆ ಅದನ್ನು ತೋಟದಲ್ಲಿಯೇ shade ಇರುವ ಜಾಗದಲ್ಲಿಯೇ ಇಟ್ಟು. ಬೇಕಾದ ಹಾಗೆ ಅದನ್ನು ಬಳಸಿ ಮತ್ತೆ ಪುನಃ ನೇರವಾಗಿ ಅಲ್ಲಿಯೇ ಮರಕ್ಕೆ ಕಟ್ಟಿ ಇಟ್ಟು ಬಿಡುತ್ತಿದ್ದೆವು. ಈ ಬಾರಿ ಬೋರ್ಡೋ ದ್ರಾವಣ ಬಿಡಲು ಪ್ರತೀ ಬಾರಿಯಂತೆ ಈ ಬಾರಿಯೂ ಬೆಳಿಗ್ಗೆ ತೆಗೆದೆವು, ಸಂಜೆಯವರೆಗೂ ಈ ಏಣಿಯಲ್ಲಿ ನಿಂತು ಔಷದಿ ಸಿಂಪಡಣೆ ಮಾಡುತ್ತಿದ್ದೆವು. ಆದ್ರೆ ಈ ಭಾರಿ ಅಂದಾಜು 4 ಗಂಟೆಯ ಸಮಯ ದಲ್ಲಿ ಒಂದು ಅವಘಡ ಸಂಭವಿಸಿತು.18 ವರ್ಷಗಳಿಂದ ಬೋರ್ಡೋ ಸಿಂಪಡಣೆ, ಅಡಿಕೆ ಕೊಯ್ಲು, ತೆಂಗಿನಕಾಯಿ ಕೊಯ್ಲು ಮಾಡುತ್ತಿದ್ದ ನಮ್ಮ ಕೆಲಸದವ(ಹೆಸರು ಕೆಂಪಯ್ಯ) ಈ 20ft ಏಣಿಯ ಮೇಲಿನ ಮೊದಲನೇ ಸ್ಟೆಪ್ ತುಂಡಾಗಿ 3 ಸ್ಟೆಪ್ ಕೆಳಗೆ ಬಂದ, ಆತ ಬಲವಾಗಿ ಮರವನ್ನು ಹಿಡಿದ ಕಾರಣ 20ft ಕೆಳಗೆ ಬೀಳಲಿಲ್ಲ. ಅದು ನಮ್ಮ ಮತ್ತು ಆತನ ಪುಣ್ಯ.3 ಸ್ಟೆಪ್ ಕೆಳಗೆ ಜಾರುವಾಗ ಆತನ ಎಡಗೈ ಯ ಮೊಣ ಕೈ ಯ ಭಾಗಕ್ಕೆ ಸ್ಟೆಪ್ನ ಎಡ್ಜ್ ತಾಗಿ ( ಆ ಭಾಗ ಶಾರ್ಪ್ ಇರ್ತದೆ) 2ಇಂಚ್ ನಷ್ಟು ಚರ್ಮ ಹರಿಯಿತು... ನಂತರ ಅದಕ್ಕೆ 3 ಹೊಲಿಗೆ ಹಾಕಿ ಟ್ರೀಟ್ಮೆಂಟ್ ಮಾಡಿಸಿದ ನಂತರ ಈಗ ಆರಾಮ ಇದ್ದಾನೆ..
ಈಗ ನನ್ನ ಪ್ರಶ್ನೆ ಇದು..?
 |
ಮೊದಲೇ ತುಂಡಾದ ಸ್ಟೆಪ್ ನ ಹೊರ ಭಾಗ
|
ಅಲ್ಯೂಮಿನಿಯಂ ಏಣಿಗೆ (ತುಳುವಿನಲ್ಲಿ ಕೇರ್ಪು) ರಸ್ಟ್ ಹಿಡಿಯುವ ಕ್ರಮ ಇದೆಯಾ? ತುಂಡಾದ ಭಾಗವನ್ನು ಗಮನಿಸಿದಾಗ ಅದರ 3 ಎಡ್ಜ್ ಮೊದಲೇ ತುಂಡಾದ ಹಾಗಿದೆ(ಒಳಗಿನ 3 ಭಾಗ ಕಪ್ಪಾಗಿದೇ ಅಂದರೆ ಸುಮಾರು ಸಮಯದ ಮೊದಲೇ ಅದು ತುಂಡಾಗಿರಬಹುದು.1 ಭಾಗ ಬಿಳಿ ಇದೆ ಅದು ಈವಾಗ ತುಂಡಾಗಿರುವುದು). ಅದು 2.5ಇಂಚ್ ಅಲ್ಯೂಮಿನಿಯಂ ಪೈಪ್ ಒಳಗಡೆ ಇರುವುದರಿಂದ ಹೊರಗಡೆ ಗೋಚರಿಸುತ್ತಿರಲಿಲ್ಲ, ಹೆಚ್ಚಿನವರಲ್ಲಿ ಈ ಏಣಿ ಬಳಸುತ್ತಿರುವುದರಿಂದ ಈ ಲೇಖನ ಬರೆಯಲಾಗಿದೆ.ಜಾಗರೂಕತೆಯಿಂದ ಸ್ಟೆಪ್ ನ ಒಳ ಭಾಗ ಗಮನಿಸಿ, ಎಲ್ಲಿಯಾದರೂ ಸಣ್ಣ ಬಿರುಕು ಕಂಡರೆ ಕೂಡಲೇ ಆ ಸ್ಟೆಪ್ ಬದಲಿಸಿ. ನಾನು ತಂದ ಕಂಪನಿ ಈವಾಗ ಪುತ್ತೂರಿನ ತನ್ನ ಅಂಗ ಸಂಸ್ಥೆ ಮುಚ್ಚಿದೆ.ಈಗ ಮಂಗಳೂರಿನಲ್ಲಿ ಮಾತ್ರ ಇರುವುದು.ಅಲ್ಲಿಂದ ಈ ಸ್ಟೆಪ್ ನ್ನು ಕೊರಿಯರ್ ಮೂಲಕ ತರಿಸಿದೆ . ಸ್ಟೆಪ್ ಗೆ 250₹ , ಕೊರಿಯರ್ ಗೆ 60₹
 |
ಹೊಸತು step |
ತುಂಡಾಗಲು ಕಾರಣ ನನ್ನ ಪ್ರಕಾರ
ಏಣಿಯ ಮೇಲಿನ ಭಾಗಕ್ಕೆ ಹೆಚ್ಚಾಗಿ ಬೋರ್ಡೋ ಬೀಳುವ ಕಾರಣ ಇರಬಹುದು, ಮಳೆಗೆ ಹೆಚ್ಚಾಗಿ ಒದ್ದೆಯಾದ ಕಾರಣ ಇರಬಹುದಾ?
ಕಂಪನಿಯು ಇಂತಹ ಏಣಿಯನ್ನು ಅಥವಾ ಯಾವುದೇ ಉಪಕರಣ ರೈತರಿಗೆ ಕೊಡುವಾಗ ಅವರು ಉಪಕರಣವನ್ನು ಬಳಸುವ ವಿಧಾನ , ಬಳಸಿದ ನಂತರ ರಕ್ಷಿಸಿ ಇಡುವ ಬಗ್ಗೆ ಮತ್ತು ಯಾವ ರೀತಿ ಜಾಗೃತೆವಹಿಸಬೇಕು ಎಂಬುದನ್ನು ವಿವರಿಸಿ ಕೊಟ್ಟರೆ ಉತ್ತಮ ಅನ್ನೋದು ನನ್ನ ಭಾವನೆ.
 |
ಹೊಸ ಸ್ಟೆಪ್ ಅಳವಡಿಸಿದ ನಂತರ |
ಕೊನೆಯ ಮಾತು
ಯಾವುದೇ ಕೃಷಿ ಯಂತ್ರೋಪರಣಗಳನ್ನು ಖರೀದಿಸುವಾಗ ಅದ್ರ ಬಿಡಿ ಭಾಗಗಳು ಸಿಗುತ್ತವೆಯೊ ಮತ್ತೂ ರಿಪೇರ್ ಸರಿಯಾದ ಸಮಯಕ್ಕೆ ಮಾಡಿಕೊಡುತ್ತಾರೆಯೊ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಖರೀದಿಸಿ....
ಈ ಲೇಖನ ಇಷ್ಟವಾದಲ್ಲಿ ಕಾಮೆಂಟ್ ಮತ್ತು share ಮಾಡಿ
Comments