ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ





ತೆಂಗಿನ ಮರ
ನೆಟ್ಟು 10 ವರ್ಷ ಆಗಿತ್ತು . ಫಸಲು  ಕೊಡಲು ಆರಂಭ ಆಗುವ ಸಮಯ ಇದ್ದಕ್ಕಿದ್ದ೦ತೆ  ತೆಂಗಿನ ಮರ ಧರೆಗೆ ಉರುಳಿ ಬಿತ್ತು. ಇದಕ್ಕಿಂತ ಮೊದಲು 2 ತೆಂಗಿನಮರ ಇದೇ ರೀತಿ ಬಿದ್ದಿತ್ತು. ಆದ್ರೆ ಅದರಬಗ್ಗೆ ಅಷ್ಟು ತಲೆ ಕೊಳ್ಳಲಿಲ್ಲ. ಆದ್ರೆ ವರ್ಷಕ್ಕೆ ಒಂದು ಮರ ಬೀಳುತ್ತಿರುವಾಗ ಅದರ ಬಗ್ಗೆ ಗಮನಹರಿಸದೆ ಇರಲು ಸಾಧ್ಯವಾಗಲಿಲ್ಲ. ತೆಂಗಿನ ಮರ ಬೀಳಲು ಕಾರಣ ಹುಡುಕುತ್ತಾ ಹೊರಟಾಗ ಸಿಕ್ಕಿದ್ದು  ಕೆಂಪು ಮೂತಿ ದುಂಬಿ (red palm weevil) . ಈ ದುಂಬಿ ಮರಕ್ಕೆ ಆದ ಗಾಯ ವನ್ನು  ಗಮನಿಸಿ, ಗಾಯದಲ್ಲಿ ಮೊಟ್ಟೆ ಇಟ್ಟು  ನಂತರ ಮೊಟ್ಟೆ ಯಿಂದ ಲಾರ್ವ ಹೊರ ಬಂದು ನಂತರ ಹುಳಗಳು ತೆಂಗಿನ ಮರದ ಕಾಂಡ ಮತ್ತು ಬೇರು ಗಳನ್ನು ನಾಶ ಮಾಡುತ್ತದೆ. ಇದೇ ಹುಳ ಕೆಲವೇ ದಿವಸಗಳಲ್ಲಿ ಕೆಂಪುಮೂತಿ ದುಂಬಿಗಳಾಗುವುದು. ಇವುಗಳೇ ತೆಂಗಿನ ಮರ ಬೀಳಲು ಕಾರಣ. ಮಳೆಗಾಲದಲ್ಲಿ ಇದರ ಹಾವಳಿ ಜಾಸ್ತಿ. ಕಾಂಡ ಕೊರೆದು ನಾರನ್ನು ತುಂಡು ಮಾಡಿ ಅದರನ್ನು ಮೊಟ್ಟೆಯಾಕರವಾಗಿ ಮಾಡಿ ಅದರೊಳಗೆ ಈ ಹುಳ ಮತ್ತು ದುಂಬಿ ಇರುತ್ತದೆ.ಈ ಹುಳ ಗೊಬ್ಬರದ ಹುಳುವನ್ನು(ಕಪ್ಪು ಮೂತಿ) ಹೋಲುವಂತೆ ಇದ್ದು.  ಇದರ ಮೂತಿ ಕೆಂಪಗೆ ಇದೆ.

ಕೆಂಪು ಮೂತಿ ದುಂಬಿ (red palm weevil)
RED PALM WEEVIL
Life cycle of red palm weevil

ಹುಳದ ಗೂಡು

ಹುಳ ಮತ್ತು ದುಂಬಿ



ದುಂಬಿ ಮತ್ತು ಹುಳ ವನ್ನು  ನಿಯಂತ್ರಣ ಮಾಡಲು ಮತ್ತು ಸಾಯಿಸಲು ಮಾರ್ಗವನ್ನು ಹುಡುಕುತ್ತಿರುವಾಗ , ನನಗೆ ಸಿಕ್ಕಿದ ಮಾಹಿತಿ- ಹುಳವನ್ನು ಕೊಲ್ಲಲು ಕೀಟನಾಶಕಗಳನ್ನು ಬಳಸಬಹುದು. ತೆಂಗಿನ ಮರದ ಬುಡವನ್ನು ಸ್ವಚ್ಛ ಗೊಳಿಸಿ, ಕೀಟನಾಶಗಳನ್ನು ಸಿಂಪಡಣೆ ಮಾಡುವುದು. ಕೀಟ ನಾಶಕಳನ್ನು ಬಳಸುವ ಮೊದಲು soil ಕ್ಲೀನರ್ ಗಳನ್ನು ಬಳಸಬಹುದು.. ಇನ್ನು ದುಂಬಿಯನ್ನು ನಾಶಗೊಳಿಸಲು ಟ್ರ್ಯಾಪ್ ಗಳನ್ನು ಬಳಸಬಹುದು. ಇದು ಪರಿಣಾಮಕಾರಿಯಾದ ವಿಧಾನ. ಈ ಕೆಂಪುಮೂತಿ ದುಂಬಿ (red palm weevil) ಗಳನ್ನು ಆಕರ್ಷಿಸುವ pheromone  lure ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.Pheromone Trap ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ ವಿದೆ... ಆದ್ರೆ ಅದು ದುಬಾರಿ 250₹ರಿಂದ800₹,pheromone lure ಗಳಿಗೆ 150₹(longtivity 2months),600₹ (longtivity 6months) ಮತ್ತು ಅಂದಾಜು 2acre ಜಾಗದಲ್ಲಿ ಇರುವ ದುಂಬಿಯನ್ನು ಆಕರ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ ..trap ಗಳನ್ನು ನಾವೇ ಮಾಡಿಕೊಳ್ಳಬಹುದು.20₹ ನಲ್ಲಿ trap ಸಿದ್ದ..



Trap ಮಾಡಲು ಬೇಕಾಗುವ ಸಾಮಗ್ರಿ:- ಅಂದಾಜು 5 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಕ್ಯಾನ್ (ವೃತ್ತಾಕಾರದಲ್ಲಿ ಇದ್ರೆ ಒಳ್ಳೇದು) ಗೆ ಸುತ್ತಲು  1 .5 ಇಂಚ್ ಅಗಲದ 3 ಅಥವಾ 4  ರಂಧ್ರ ಮಾಡಿ.. ಕ್ಯಾನ್ ನ ಮುಚ್ಚಳ ಕ್ಕೆ ಸಣ್ಣ ತೂತು ಮಾಡಿ   ಅದರ ಮೂಲಕ ಒಂದು ಸರಿಗೆ ಯಲ್ಲಿ ಫೆರಮೊನ್ lure ನ್ನು ಗಟ್ಟಿಯಾಗಿ ಕಟ್ಟಿ, ಕ್ಯಾನ್ ಗೆ ಅಂದಾಜು 1.5ltr ನಷ್ಟು ನೀರನ್ನು ತುಂಬಿಸಿ . ಬಿಗಿಯಾಗಿ ಮುಚ್ಚಳ ಹಾಕಿ.. ನಂತರ ಟ್ರ್ಯಾಪ್  ಅನ್ನು ಯಾವುದಾದ್ರೂ ಉಪಯುಕ್ತ ಅಲ್ಲದ ಮರಕ್ಕೆ ಬಿಗಿಯಾಗಿ ಕಟ್ಟಿಬಿಡಿ..ಈ ಟ್ರ್ಯಾಪ್ ಅನ್ನು ಆದಷ್ಟು ತೋಟದ ಹೊರಗಡೆ ಇಟ್ರೆ ಒಳ್ಳೆಯದಂತೆ.

Trap ನ ಒಳಗಡೆ pheromone lure

pheromone trap 

ತೆಂಗಿನ ಮರಕ್ಕೆ ಮುಖ್ಯವಾಗಿ ಹಾನಿ ಮಾಡುವ 2 ದುಂಬಿಗಳು

Comments

Popular posts from this blog

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!