ಗ್ರಾಹಕರನ್ನು ಮೊಬೈಲ್ ಮತ್ತು ಟಿವಿ ಸರ್ವೀಸ್ ಸೆಂಟರ್ ಗಳು ಹೇಗೆ ದೋಚುತ್ತಿವೆ ? Smart tv ಯ ಗ್ರಾಹಕರನ್ನು ವಂಚಿಸುತ್ತಿರುವ ಕಂಪನಿಗಳು!!?


LG 43 UHD 4K SMART ಹೊಸ ಟಿವಿ ತಂದ ಸಮಯ ಇದನ್ನು ಇನ್ಸ್ಟಾಲ್ ಮಾಡಲು ಕಂಪನಿ ಯವರಲ್ಲಿ ಕೇಳಿದ್ರೆ ಫ್ರೀ ಇನ್ಸ್ಟಾಲ್ ಮಾಡ್ತೇವೆ ಅಂದ್ರು, ಆಯ್ತು ಕಳಿಸಿ ಕೊಡಿ ಅಂದೆ, ಸ್ವಲ್ಪ ಸಮಯದಲ್ಲಿ  ಪುತ್ತೂರಿನ ಅಧಿಕೃತ ಡೀಲರ್  ಫೋನ್ ಮಾಡಿದ್ರು, ಟಿವಿ ಯ ಬಗ್ಗೆ ಕೇಳಿದ್ರು ಹೇಳಿದೆ. ವಾರಂಟಿ ಕಾರ್ಡ್ ನ ಮಾಹಿತಿ ಕೇಳಿದ್ರು(ನಮ್ಮದು ಕತಾರ್ ನಿಂದ ತಂದ tv) ಅದ್ರ ಮಾಹಿತಿ ಕೊಟ್ಟೆ. ಇಂಟರ್ನ್ಯಾಷನಲ್ ವಾರಂಟಿ ಕಾರ್ಡ್ ಗೆ ಫ್ರೀ instalation ಇಲ್ಲ ಅಂದ್ರು. ಹಾಗಾದ್ರೆ ಚಾರ್ಜ್ ಎಷ್ಟು ಆಗುತ್ತೆ ಅಂದೆ. 2 ಸಾವಿರ ಅಂದ್ರು... ನಾನು ಆವಾಗ ಅವರಲ್ಲಿ ಕೇಳಿದೆ LG tv ಇಲ್ಲಿಂದ ತೆಕ್ಕೊಂಡ್ರು, ಫಾರಿನ್ ನಿಂದ ತೆಕ್ಕೊಂಡ್ರು ಕಂಪನಿ ಅದೇ ಅಲ್ವೇ, ಬಿಲ್ ಅದೇ ಅಲ್ವಾ ಅಂದೆ. ಫ್ರೀ ಇನ್ಸ್ಟಾಲ್ ಆದ್ರೆ ಬನ್ನಿ. ಇಲ್ದಿದ್ರೆ ನಾನೇ ಮಾಡ್ತೇನೆ ಅಂದೆ. ನಾನೇ ಇನ್ಸ್ಟಾಲ್ ಮಾಡಿದೆ ಕೂಡ....


Tv ಡಿಸ್ಪ್ಲೇ ಯ ಕೆಳ ಭಾಗದಲ್ಲಿ line ಗಳು

Smart tv ಯ ಒಳಭಾಗ


T-con ಬೋರ್ಡ್



ಇದಾಗಿ 2 ವರ್ಷ ಆಗಿರಬಹುದು. ಚೆನ್ನಾಗಿ ಕಾಣುತ್ತಿದ್ದ tv ಯ ಪರದೆಯ ಮೇಲೆ ಅಡ್ಡಲಾಗಿ ಲೈನ್ ಗಳು ಕಾಣಲಾರಂಬಿಸಿತು. ವಾರಂಟಿಯ ಅವಧಿ ಮುಗಿದಿತ್ತು. ಪುತ್ತೂರಿನ ಅಧಿಕೃತ ಸರ್ವೀಸ್ ಸೆಂಟರ್ಗೆ call ಮಾಡಿದೆ. ಸಮಸ್ಯೆ ಹೇಳಿದೆ. ಹೇಳಿದ ಕೂಡಲೇ ಡಿಸ್ಪ್ಲೇ ಹೋಗಿದೆ ಅಂದು ಬಿಡೋದಾ... ನಾನಂದೆ ನೀವು ಟಿವಿ ನೋಡದೆ ಅದು ಡಿಸ್ಪ್ಲೇ ಹೋಗಿದೆ ಅಂತ ಹೇಗಂದ್ರಿ ಅಂತ. ಲೂಸ್ ಕನೆಕ್ಷನ್ ಅಥವಾ ಬೇರೆ ಯಾವುದಾದ್ರೂ ಮೈನರ್ ಸಮಸ್ಯೆ ಇರ ಬಹುದು ಅಲ್ವಾ ಅಂದೆ. ಅದಕ್ಕೆ ಬೋರ್ಡ್ repair ಮಾಡೋದಿಕ್ಕೆ ಆಗೋದಿಲ್ಲ. T-con ಬೋರ್ಡ್ ಸಮಸ್ಯೆ ಇದ್ರೆ ತೆಗೆಯೋದು ಹೊಸತ್ತು ಇನ್ಸ್ಟಾಲ್ ಮಾಡೋದು ಅಷ್ಟೆ ಅಂದರು.(vertical ಅಥವಾ Horizontal lines LED pannel ನಲ್ಲಿ ಬಂದ್ರೆ ಅದು T-con ಬೋರ್ಡ್ ನ ಸಮಸ್ಯೆ )  ನಿಮ್ಮ ಮೊಡೆಲ್ ಗೆ T-con ಬೋರ್ಡ್ ಮಾತ್ರ ಸಿಗೋದಿಲ್ಲ ಪ್ಯಾನೆಲ್ ಜೊತೆಗೆ ಅದು ಬರೋದು ಅಂದ್ರು... ಯಾವುದಕ್ಕೂ ಬಂದು ನೋಡಿ ಮತ್ತೆ ನೋಡೋಣ ಅಂದೆ.2 ದಿವಸದಲ್ಲಿ ಸರ್ವೀಸ್ ಮಾಡಲು ಅವರ ಪ್ರತಿನಿಧಿ ಬಂದ . Tv on ಮಾಡಿದ ಡಿಸ್ಪ್ಲೇ ಹೋಗಿದೆ ಅಂದ. ನಂತ್ರ ಟಿವಿ ಬಿಡಿಸಿದ (ಡಿಸ್ಪ್ಲೇ ಯ ನಂಬರ್ ಗಾಗಿ) ಯಾವುದೇ ಬೋರ್ಡ್ ಗಳನ್ನು ನೋಡಲಿಲ್ಲ T-con ಬೋರ್ಡ್, pcb ಗೆ smps ನಿಂದ ಬರುವ ಕನೆಕ್ಟಿಂಗ್ ಲೈನ್ ವೈರ್ ಗಳನ್ನು ಕಾಟಾಚಾರ ಕ್ಕೆ ತೆಗೆದು ಹಾಕಿದ ಅಷ್ಟೆ. ಅವನಲ್ಲಿ ಡಿಸ್ಪ್ಲೇ ಗೆ ಎಷ್ಟು ಆಗುತ್ತೆ, ವಾರಂಟಿ ಇದ್ಯ ಅಂತ ಕೇಳಿದೆ ,19 ಸಾವಿರ ಆಗುತ್ತೆ ,3 ತಿಂಗಳು ವಾರಂಟಿ ಅಂದ. ಮರು ದಿವಸ ಡೀಲರ್ ಫೋನ್ ಮಾಡಿ ಡಿಸ್ಪ್ಲೇ ತರಿಸೋದ ಅಂದ!!!.... ಡಿಸ್ಪ್ಲೇ ಗೆ 19 ಸಾವಿರ ಕೊಡುವ (3 ತಿಂಗಳು ವಾರಂಟಿ ) ಬದಲು ಅದಕ್ಕೆ 2 ಸಾವಿರ ಸೇರಿಸಿದರೆ 43 ಇಂಚ್ ನ 2 ವರ್ಷ ವಾರಂಟಿ ಇರುವ ಹೊಸ ಫುಲ್ Hd ಟಿವಿ ತೆಗಿಬಹುದಲ್ವಾ ಅಂದೆ... ನಕ್ಕು ಸುಮ್ಮನಾದ... ಡಿಸ್ಪ್ಲೇ ಯನ್ನು 1 ಘಂಟೆ ಯಲ್ಲಿ ಹಾಕಿ ಕೊಡ್ತೇನೆ ಅಂದ.. ಸ್ವಲ್ಪ ದಿವಸ ಕಳೆಯಲಿ ಹೇಳ್ತೇನೆ ಅಂದೆ ಅವನಲ್ಲಿ.... ಈ ಪ್ಯಾನೆಲ್ ನ ಬಗ್ಗೆ ಮತ್ತು ಬೋರ್ಡ್ ನ ಬಗ್ಗೆ ಹಲವರಲ್ಲಿ ವಿಚಾರಿಸಿದೆ ಸಮರ್ಪಕ ಉತ್ತರ ಸಿಗದೆ ಇದ್ದಾಗ, ನಾನು ಇಂಟರ್ನೆಟ್ ಮೊರೆಹೋದೆ, ಅದರ ಬಗ್ಗೆ ಕೆಲವಾರು ಆರ್ಟಿಕಲ್ ಮತ್ತು ಮಾಹಿತಿ ಕಲೆ ಹಾಕಿದೆ.ಪ್ರಮುಖ ವಾಗಿ ಈ ಡಿಸ್ಪ್ಲೇ (LED PANEL) ಯಲ್ಲಿ Horizontal ಲೈನ್ ಬರಲು ಕಾರಣ ಮತ್ತು ಸರಿ ಮಾಡುವ ಬಗ್ಗೆ ಸ್ಟಡಿ ಮಾಡಿದೆ. ಕೆಲವೇ ದಿವಸದಲ್ಲಿ ಆನ್ಲೈನ್ ನಲ್ಲಿ ನೋಡಿದ ಮತ್ತು ಕಲೆ ಹಾಕಿದ ಮಾಹಿತಿಗಳನ್ನು ನೋಟ್ ಮಾಡಿಟ್ಟು ಕೊಂಡಿದ್ದನ್ನು ಕಾರ್ಯರೂಪಕ್ಕೆ ತರಲು ಟಿವಿ ಯ ಬ್ಯಾಕ್ ಪ್ಯಾನೆಲ್ ಬಿಡಿಸಿದೆ ಎಲ್ಲ ಕನೆಕ್ಟಿಂಗ್ ಕೇಬಲ್ ಗಲ್ಲಿ ಇರುವ ಕನೆಕ್ಟಿಂಗ್ ಲೈನ್ ಗಳನ್ನು ಕ್ಲೀನ್ ಮಾಡಿ ಹಾಕಿದೆ.. ಆದ್ರೂ ಟಿವಿ ಯ ಡಿಸ್ಪ್ಲೇ ಯ ಲೈನ್ ಮರೆಯಾಗಲಿಲ್ಲ.. ಸರಿಯಾಗದೆ ಇರಲು ಕಾರಣ T-con ಬೋರ್ಡ್ ಅನ್ನೋದು ಗೊತ್ತಾಯಿತು. ಮುಂದಿನ ಹಂತ T CON ಬೋರ್ಡ್ ನಿಂದ pcb (mother board)ಗೆ ಬರುವ ಕನೆಕ್ಟಿಂಗ್ ಕೇಬಲ್ ಗಳು(2 ಕೇಬಲ್ ಇವೆ ಅದ್ರಲ್ಲಿ 1 ಕೇಬಲ್ 50% led ಗಳು on ಮಾಡಲು  ಇನ್ನೊಂದು ಇನ್ನುಳಿದ 50%  led on ಆಗಲು )ಅದನ್ನು ತೆಗೆದು 1 ಕೇಬಲ್ ನ 2 ಲೈನ್ ಗಳನ್ನು ಬ್ಲಾಕ್ ಮಾಡಿದೆ... ನಂತರ Tv ಗೆ power ಸಪ್ಲೈ ಕೊಟ್ಟೆ ಟಿವಿ ಯ ಡಿಸ್ಪ್ಲೇ ಯಲ್ಲಿ ಯಾವುದೇ ಲೈನ್ ಗಳಿರಲಿಲ್ಲ... ಪಿಕ್ಚರ್ ಕ್ವಾಲಿಟಿ ಕೂಡ ಮೊದಲಿನಂತೆ ಇತ್ತು.. ಇದಕ್ಕೆ ನನಗೆ ಆದ ಖರ್ಚು ಕೇವಲ 10rs ನ ಟ್ರಾನ್ಸ್ಪರೆಂಟ್ tape ಅಷ್ಟೆ... ಯಾವುದೇ components ಬೇಕಾಗಲಿಲ್ಲ.... ನಂತ್ರLG ಡೀಲರ್ ಮತ್ತು ಮನೆಗೆ ಬಂದ ಅವರ ಸರ್ವೀಸ್ ಎಕ್ಸಿಕ್ಯೂಟಿವ್ ಗೆ ಫೋನಾಯಿಸಿ ಹೇಳಿದೆ... ಯಾಕೆ ಸಾರ್ ಸುಳ್ಳು ಹೇಳಿದ್ರಿ.. ಇಷ್ಟು ಸಣ್ಣ ಫೌಲ್ಟ್ ಗೆ.. ಡಿಸ್ಪ್ಲೇ ಬದಲಾಯಿಸಲು ಯಾಕೆ ಹೇಳಿದ್ರಿ ಅಂದೆ. ಅದಕ್ಕೆ ಅವರಂದ್ರು ಅದು ಟೆಂಪರರಿ solution ಮತ್ತು ಜಾಸ್ತಿ ಅಂದ್ರೆ 6 ತಿಂಗಳು ಕಾಣ ಬಹುದು ಮತ್ತೆ ಪುನಃ ಅದೇ ಲೈನ್ ಬರ್ತದೇ ಅಂದ್ರು.. ನಾವು ರಿಸ್ಕ್ ತೆಗೆದುಕೊಳ್ಳಲು ರೆಡಿ ಇಲ್ಲ ಅಂದ್ರು.ಸರಿ ನೋಡುವ ಎಷ್ಟು ಸಮಯ ಇರುತ್ತದೆ ಅಂತ ಅಂದೆ.ಇದು ಆಗಿ 8 ತಿಂಗಳು ಕಳೆಯಿತು ಟಿವಿ ಯಾವುದೇ ತೊಂದ್ರೆ ಇಲ್ಲದೆ .. ಗುಣಮಟ್ಟದ ಪಿಕ್ಚರ್ ಕಾಣುತ್ತಿದೆ.



ಕೊನೆಯ ಮಾತು👉🏼

ಯಾವುದೇ ವಸ್ತು ಹಾಳಾದಲ್ಲಿ ಅಥವಾ ಸರಿಯಾಗಿ ಕೆಲಸ ಮಾಡುತ್ತಿಲ್ಲ ವಾದರೆ repair ಗೆ ಕೊಡುವ ಮೊದಲು ವಿಚಾರಿಸಿ ಕೊಡಿ ಅಥವಾ ನೀವೇ ಆನ್ಲೈನ್ ನಲ್ಲಿ ಅದರ ಮಾಹಿತಿ ತಿಳಿದು ಮುಂದುವರೆಯಿರಿ. ಇಲ್ಲದಾದಲ್ಲಿ ನಿಮ್ಮನ್ನು ಸರ್ವೀಸ್ ಸೆಂಟರ್ ನವರು  ಮೋಸ ಮಾಡುವುದು ಖಂಡಿತ.ಮೊಬೈಲ್ ಆಗಲಿ tv ಆಗಲಿ ಡಿಸ್ಪ್ಲೇ ಹೋಗೋದಿಲ್ಲ , ಡಿಸ್ಪ್ಲೇ ಹೋಗೋದು ಬಾರೀ ಕಡಿಮೆ.... ಮೊಬೈಲ್ ನಲ್ಲಿ ಟಚ್ ಮಾತ್ರ ಹಾಳಗೋದು , ಬಿದ್ರೂ ಓಡೆಯೋದು ಅದು ಮಾತ್ರ .. ಟಚ್ ಮತ್ತು ಡಿಸ್ಪ್ಲೇ ಬೇರೆ ಬೇರೆ... ಇದರ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೊಮ್ಮೆ ಕೊಡುತ್ತೇನೆ... 


ಈ  ಮಾಹಿತಿ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ಈ ಪೋಸ್ಟ್ ಗೆ comment✍️ ಮಾಡಿ , ಲಿಂಕ್ share🔄 ಮಾಡಿ ಮತ್ತು ಬ್ಲಾಗ್ follow ಮಾಡಿ ಪ್ರೋತ್ಸಾಹ ಕೊಡಿ.

Comments

ಓ ಇಂಚ ಮಾತ ಉಂಡತ್ತೇ. ಎನಡ ಟೀವಿನೆ ಇಜ್ಜಿ ಭಟ್ರೆ.

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!