ಮೊಬೈಲ್ ಗೆ ಹೊಸದಾದ ಫಾಂಟ್ ಗಳನ್ನು ಹೇಗೆ ಡೌನ್ಲೋಡ್ ಮಾಡುವುದು?





ಫಾಂಟ್ಗಳು ಮೊಬೈಲ್ ನ ಒಂದು ಅಂಗ. ಫೋಟೋ, ವಿಡಿಯೋ ಎಡಿಟ್ ಮಾಡುವಾಗ ಈ font ಗಳು ಬಹುಮುಖ್ಯ... ಕೆಲವು ಮೊಬೈಲ್ ಗಳಲ್ಲಿ pre install /default ಆಗಿ  ಫಾಂಟ್ ಗಳು ಇರುತ್ತವೆ. ಇದಕ್ಕೆ ಇನ್ನೂ ಹೊಸದಾದ ಫಾಂಟ್ ಗನ್ನು ಡೌನ್ಲೋಡ್ ಮಾಡಿ ಸೇರಿಸ ಬಹುದು... ಇದಕ್ಕಾಗಿಯೇ playstore ನಲ್ಲಿ ಹಲವು ಅಪ್ಲಿಕೇಶನ್ ಗಳಿವೆ... ಈ ಆ್ಯಪ್ ಗಳಲ್ಲಿ ಅನಗತ್ಯ ಫಾಂಟ್ ಗಳು ಇರುತ್ತವೆ. ಇದು ಮೊಬೈಲಿನ ಇಂಟರ್ನಲ್ ಮೆಮೊರಿಯನ್ನು ಜಾಸ್ತಿ ಬಳಸಿಕೊಳ್ಳುತ್ತದೆ... ಇದಕ್ಕಿಂತ ಕೆಲವೇ ಕಿಲೋ ಬಿಟ್ ಗಳಲ್ಲಿ ಫಾಂಟ್ ಡೌನ್ಲೋಡ್ ಮಾಡಬಹುದು.. ಫಾಂಟ್ ಗಳಿಗಾಗಿಯೇ ಆನ್ಲೈನ್ ನಲ್ಲಿ ಹಲವು web site ಗಳಿವೆ. ಅದರಲ್ಲಿ ಒಂದು https://www.dafont.com ಇದರಲ್ಲಿ ಹಲವು ರೀತಿಯ ಫಾಂಟ್ ಗಳು ಲಭ್ಯ. ನಿಮಗೆ ಇಷ್ಟವಾದ ಫಾಂಟ್ ಗಳನ್ನು ಮಾತ್ರ ಡೌನ್ಲೋಡ್ ಮಾಡಿಕೊಳ್ಳಬಹುದು..

ಫಾಂಟ್ ಡೌನ್ಲೋಡ್ ಮಾಡುವ ವಿಧಾನ:-

https://www.dafont.com ವೆಬ್ಸೈಟ್ ಗೆ ಹೋಗಿ ನಿಮಗೆ ಬೇಕಾದ ಫಾಂಟ್ ಆಯ್ಕೆ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ...ಈ ಫಾಂಟ್ ಗಳು zip ಫಾರ್ಮ್ಯಾಟ್ ನಲ್ಲಿರುತ್ತವೆ.zip ಫೋಲ್ಡರ್ ಗೆ ಫಾಂಟ್ ಡೌನ್ಲೋಡ್ ಆಗಿರುತ್ತವೆ. ಆ ಫೋಲ್ಡರ್ ಗೆ ಹೋಗಿ zip ಫೈಲ್ ಗಳನ್ನು unzip ಮಾಡಿಕೊಳ್ಳಿ(unzip ಮಾಡಲು  zip ಫೋಲ್ಡರ್ ಗೆ ಹೋಗಿ zip ಫೈಲ್ ಸೆಲೆಕ್ಟ್ ಮಾಡಿ ದಾಗ  ಫೋಲ್ಡರ್ನ ಮೇಲೆ ಬಲ ಬದಿಯಲ್ಲಿರುವ 3 ಡಾಟ್ ಗಳನ್ನು ಕ್ಲಿಕ್ ಮಾಡಿ . ನಿಮಗೆ unzip option ಕಾಣಿಸುತ್ತದೆ) .. ನಂತರ ಡೌನ್ಲೋಡ್ ಮಾಡಿದ ಫಾಂಟ್ ಫೋಲ್ಡರ್ ಗೆ ಹೋಗಿ ಅಲ್ಲಿ ( **.ttf)file ಇರುತ್ತವೆ. ಅದನ್ನು ಕಾಪಿ ಮಾಡಿ ..internal ಮೆಮೊರಿ ಯ font folder ಗೆ paste ಮಾಡಿ.ಈಗ ನೀವು ಯಾವುದೇ ಫೋಟೋ ಎಡಿಟರ್ app ಅಥವಾ ವಿಡಿಯೋ ಎಡಿಟಿಂಗ್ app ನಲ್ಲಿ ಫಾಂಟ್ ಗಳು ಬೇಕಾದಲ್ಲಿ ಆ app ನಲ್ಲಿ font ಗೆ ಕ್ಲಿಕ್ ಕೊಡಿ ಅಲ್ಲಿ my font ಫೋಲ್ಡರ್ ಗೆ ಕ್ಲಿಕ್ ಮಾಡಿದರೆ ನೀವು ಡೌನ್ಲೋಡ್ ಮಾಡಿದ ಫಾಂಟ್ ಗಳು ಸಿಕ್ಕುತ್ತವೆ....

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!