ಮೊಬೈಲ್ ಹೊಸದಾಗಿ ಇರುವಾಗ ಬ್ಯಾಟರಿ ಯ ಗುಣಮಟ್ಟ, ಸೌಂಡ್ ನ ಗುಣ ಮಟ್ಟ, ಟಚ್ ರೆಸ್ಪಾನ್ಸ್ ನ ಗುಣಮಟ್ಟ ಒಳ್ಳೆಯದಾಗಿರುತ್ತದೆ. ಕೆಲವು ವರ್ಷಗಳ ನಂತರ ಇವೆಲ್ಲ ಕಡಿಮೆ ಆಗುತ್ತವೆ ಯಾಕೆ.. ಇದ್ರ ಬಗ್ಗೆ ಮಾಹಿತಿ ಇಲ್ಲಿದೆ



ಯಾವುದೇ ಕಂಪನಿಗಳು ಗ್ರಾಹಕರಿಗೆ ಮೊಬೈಲ್ ಕೊಡುವಾಗ sound , ಟಚ್,ಸೆನ್ಸಾರ್, ಬ್ಯಾಟರಿ, ಗುಣಮಟ್ಟದಿಂದ ಇರುತ್ತದೆ.ಕೆಲವು ವರ್ಷಗಳ ನಂತರ ಇವೆಲ್ಲ ವೂ ಮೊದಲಿನ ಗುಣಮಟ್ಟ ಇರುವುದಿಲ್ಲ. ಅಂದರೆ sound ಕಡಿಮೆ , ಟಚ್ response ಕಡಿಮೆ ಆಗೋದು, ಮೊಬೈಲ್ ಡಿಸ್ಪ್ಲೇ freeze ಆಗೋದು, ಸೆನ್ಸಾರ್ ಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದು, ಬ್ಯಾಟರಿ ಬ್ಯಾಕ್ ಅಪ್ ಇಲ್ಲದೆ ಇರೋದು, ಇದೆಲ್ಲ ನಿಮಗೂ ಅನುಭವಕ್ಕೆ ಬಂದಿರಬಹುದು. ಇದಕ್ಕೆ ಕಾರಣವನ್ನು ಸಂಕ್ಷಿಪ್ತವಾಗಿ ಈ ಬರಹ ದಲ್ಲಿ ನೀವು ತಿಳಿಯಬಹುದು.






 ಯಾವುದೇ ಮೊಬೈಲ್ ನ software
Update or app update ಕೇಳಿದ್ರೆ ತಕ್ಷಣ ಅಪ್ಡೇಟ್ ಮಾಡಬೇಡಿ. ಅಗತ್ಯ ಇದ್ದಲ್ಲಿ ಮಾತ್ರ ಅಪ್ಡೇಟ್ ಮಾಡಿ. software ಗಳಲ್ಲಿ ಡೆವೆಲಪರ್ ಗಳು  ಮೊಬೈಲ್ ನ ಸಿಸ್ಟಮ್ ಗೆ ಸಂಬಂದಿಸಿದ code ಗಳನ್ನು ಅಪ್ಡೇಟ್ ಮಾಡಿರುತ್ತಾರೆ.. ಅಂದರೆ sound system, ಬ್ಯಾಟರಿ backup, ಸೆನ್ಸಾರ್, ಡಿಸ್ಪ್ಲೇ ಗಳನ್ನು code ಗಳು ನಿಯಂತ್ರಣ ಮಾಡುತ್ತದೆ. ಈ ಅಪ್ಡೇಟ್ ಮಾಡಿದ code ಮತ್ತು ಹೊಸದಾಗಿ handset ಬರುವಾಗ ಇರುವ code ಗಳು ಬದಲಾಗುವುದರಿಂದ ಲೆ ಮೊಬೈಲ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುವುದು ( ಈ ರೀತಿ ಮಾಡಲು app developer ಗಳಿಗೆ ಕಂಪನಿಗಳು ಹೇಳುವುದೋ ಗೊತ್ತಿಲ್ಲ) . ಅಂದರೆ ಹೊಸದಾಗಿ ಅಪ್ಡೇಟ್ ಮಾಡಿದ os & s/w ಗಳಲ್ಲಿ  ಬ್ಯಾಟರಿ optimisation ಮಾಡದೆ ಇರುವುದು, ಸೌಂಡ್ ಕಡಿಮೆ ಇರುವಂತೆ ಮಾಡುವುದು,eq bal ಸರಿಯಾಗಿ ನಿರ್ವಹಿಸದೆ ಇರುವಂತೆ ಮಾಡೋದು ,app ಗಳು  ram & rom  ಜಾಸ್ತಿ ಬಳಸುವಂತೆ ಮಾಡುವುದು,cache & cookies auto clear ಆಗದಂತೆ software ನ code ಗಳನ್ನು decode ಮಾಡಿರುತ್ತಾರೆ.



ಇನ್ನೂ  ಕೆಲವು ಕಾರಣಗಳು:

ಇದೂ ಅಲ್ಲದೆ ಇನ್ನೂ ಕೆಲವು ಕಾರಣ ಇದೆ.. ಬ್ಯಾಟರಿ ಬ್ಯಾಕ್ ಅಪ್ ಕಡಿಮೆ ಆಗಲು background ನಲ್ಲಿ app ಗಳು run ಆಗುವುದು,app ಗಳು ಆಟೋ sync ಆಗಿರುವುದು,app ಗಳು location ನನ್ನು back ground ನಲ್ಲೇ ಸರ್ಚ್ ಮಾಡುತ್ತಿರುವುದು... ಇದನ್ನೆಲ್ಲ off ಮಾಡಿದಲ್ಲಿ ಬ್ಯಾಟರಿ ಬ್ಯಾಕ್ ಅಪ್ ಹೆಚ್ಚು ಮಾಡಬಹುದು.. ಇನ್ನು phone hang ಆಗಲು ಅಥವಾ ಫೋನ್ ಕೆಲವೊಮ್ಮೆ ತನ್ನಿಂತಾನಾಗಿ switch off /on ಆಗುವುದು ಇದಕ್ಕೆಲ್ಲ ಕಾರಣ ಫೋನ್ rom ಮತ್ತು ram ಕಡಿಮೆ ಆಗೋದು.mobile app ಗಳು ಫೋನ್ ನ rom (internal memory) ಮತ್ತು ram ಜಾಸ್ತಿ ಬಳಸುತ್ತದೆ. ಇದಕ್ಕೆ ಮೊಬೈಲ್ app ಸಂಗ್ರಹಿಸಿದ  ಅನಗತ್ಯ cache ಮತ್ತು ಅನಗತ್ಯ data ಗಳನ್ನು clear ಮಾಡುತ್ತಾ ಬಂದರೆ ಫೋನ್ ಗುಣ ಮಟ್ಟ ಹೊಸತು ಮೊಬೈಲ್ ನಂತೆ ಇರುತ್ತದೆ. ಕಡಿಮೆ rom ಹೊಂದಿರುವ ಮೊಬೈಲ್ ಗಳಲ್ಲಿ ಆದಷ್ಟು file ಗಳನ್ನು internal storage ನಲ್ಲಿ ಇಡಬೇಡಿ.sd card ನಲ್ಲಿ store ಮಾಡಿ.ram ಗಳನ್ನು ಮತ್ತು ಬ್ಯಾಕ್ಗರೌಂಡ್ನಲ್ಲಿ run ಆಗುತ್ತಿರುವ app ಗಳನ್ನು ಕ್ಲೋಸ್ ಮಾಡಿ. ಮೊಬೈಲ್ ನನ್ನು ತಿಂಗಳಿಗೆ ಒಮ್ಮೆಯಾದರು off ಮಾಡಿ on ಮಾಡಿ, ಬ್ಯಾಟರಿ ಯಾವಾಗಲೂ 100% ಚಾರ್ಜ್ ಮಾಡಬೇಡಿ.location ಬೇಕಾದ್ರೆ ಮಾತ್ರ enable/on ಮಾಡಿ. ಇವೆಲ್ಲ ಮೊಬೈಲ್ ನ ಗುಣಮಟ್ಟ ಮತ್ತು ಅದರ ಹೆಲ್ತ್ ನನ್ನು ಹೆಚ್ಚು ಮಾಡಲು, ಪರ್ಫಾಮೆನ್ಸ್ ಹೆಚ್ಚು ಮಾಡಲು  ಸಹಕಾರಿ .

ಪ್ರಕಾಶ ದೇರ್ಜಾಲು

Comments

Popular posts from this blog

ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ

ಅಪ್ಪನ ಶಾಂತ ಸ್ವಭಾವ ದ ಬಗ್ಗೆ ಒಂದು ಬರಹ!