ತೆಂಗಿನ ಮರದ ಶತ್ರು ಹಂತಕ ಕೆಂಪುಮೂತಿ ದುಂಬಿಯ(RPW) ಬಗೆಗಿನ ಮಾಹಿತಿ ಇಲ್ಲಿದೆ
ತೆಂಗಿನ ಮರ ನೆಟ್ಟು 10 ವರ್ಷ ಆಗಿತ್ತು . ಫಸಲು ಕೊಡಲು ಆರಂಭ ಆಗುವ ಸಮಯ ಇದ್ದಕ್ಕಿದ್ದ೦ತೆ ತೆಂಗಿನ ಮರ ಧರೆಗೆ ಉರುಳಿ ಬಿತ್ತು. ಇದಕ್ಕಿಂತ ಮೊದಲು 2 ತೆಂಗಿನಮರ ಇದೇ ರೀತಿ ಬಿದ್ದಿತ್ತು. ಆದ್ರೆ ಅದರಬಗ್ಗೆ ಅಷ್ಟು ತಲೆ ಕೊಳ್ಳಲಿಲ್ಲ. ಆದ್ರೆ ವರ್ಷಕ್ಕೆ ಒಂದು ಮರ ಬೀಳುತ್ತಿರುವಾಗ ಅದರ ಬಗ್ಗೆ ಗಮನಹರಿಸದೆ ಇರಲು ಸಾಧ್ಯವಾಗಲಿಲ್ಲ. ತೆಂಗಿನ ಮರ ಬೀಳಲು ಕಾರಣ ಹುಡುಕುತ್ತಾ ಹೊರಟಾಗ ಸಿಕ್ಕಿದ್ದು ಕೆಂಪು ಮೂತಿ ದುಂಬಿ (red palm weevil) . ಈ ದುಂಬಿ ಮರಕ್ಕೆ ಆದ ಗಾಯ ವನ್ನು ಗಮನಿಸಿ, ಗಾಯದಲ್ಲಿ ಮೊಟ್ಟೆ ಇಟ್ಟು ನಂತರ ಮೊಟ್ಟೆ ಯಿಂದ ಲಾರ್ವ ಹೊರ ಬಂದು ನಂತರ ಹುಳಗಳು ತೆಂಗಿನ ಮರದ ಕಾಂಡ ಮತ್ತು ಬೇರು ಗಳನ್ನು ನಾಶ ಮಾಡುತ್ತದೆ. ಇದೇ ಹುಳ ಕೆಲವೇ ದಿವಸಗಳಲ್ಲಿ ಕೆಂಪುಮೂತಿ ದುಂಬಿಗಳಾಗುವುದು. ಇವುಗಳೇ ತೆಂಗಿನ ಮರ ಬೀಳಲು ಕಾರಣ. ಮಳೆಗಾಲದಲ್ಲಿ ಇದರ ಹಾವಳಿ ಜಾಸ್ತಿ. ಕಾಂಡ ಕೊರೆದು ನಾರನ್ನು ತುಂಡು ಮಾಡಿ ಅದರನ್ನು ಮೊಟ್ಟೆಯಾಕರವಾಗಿ ಮಾಡಿ ಅದರೊಳಗೆ ಈ ಹುಳ ಮತ್ತು ದುಂಬಿ ಇರುತ್ತದೆ.ಈ ಹುಳ ಗೊಬ್ಬರದ ಹುಳುವನ್ನು(ಕಪ್ಪು ಮೂತಿ) ಹೋಲುವಂತೆ ಇದ್ದು. ಇದರ ಮೂತಿ ಕೆಂಪಗೆ ಇದೆ.
Comments