ಅಪ್ಪನ ಕಾಯಕ ನಾ ಕಂಡಂತೆ.....
ಸೀತಾರಾಮ ಭಟ್ ಸುಮಾರು 40 ವರ್ಷದ ಹಿಂದೆ ತಂದೆ ದೈನಿಕ ಠೇವಣಿ ಸಂಗ್ರಾಹಕ (pigmy collector) ಕೆಲಸಕ್ಕೆ ಸೇರಿದರು... ಬೆಳಿಗ್ಗೆ 9.45 ಕ್ಕೆ ಮನೆಯಿಂದ ಹೊರಟರೆ 10.30 ಕ್ಕೆ ಬ್ಯಾಂಕ್ ಗೆ ತಲುಪಿ.10.30 ರಿಂದ 12.30ರ ವರೆಗೆ ಆಫೀಸ್ ನಲ್ಲಿ ಕೆಲಸ.. 12.30ರಿಂದ5 ಗಂಟೆ ವರೆಗೆ ಪಿಗ್ಮಿ ಕಲೆಕ್ಷನ್ ಮಾಡುತ್ತಿದ್ದರು. ಈ ಸಮಯದಲ್ಲಿ ಹಲವಾರು ಒಳ್ಳೆಯ ಗೆಳೆಯರನ್ನು ಪಡೆದಿದ್ದರು ಅಪ್ಪ. ತನ್ನ ಜೀವಿತದ ಕೊನೆಯವರೆಗೂ ಅಂದರೆ ಜನವರಿ 17ರ ವರೆಗೂ ಪ್ರಾಮಾಣಿಕವಾಗಿ ದುಡಿದವರು.... ನಾವು 2005 ಕ್ಕಿಂತ ಮೊದಲು ವಜ್ರಾಂಗಿ ಎಂಬಲ್ಲಿ ಇದ್ದೆವು.. ಅಲ್ಲಿನ ಮನೆ, ದನದ ಕೊಟ್ಟಿಗೆ ಎಲ್ಲಾ ತಂದೆಯ ಬೆವರು ಹನಿ ಸುರಿಸಿ ಗಳಿಸಿದ ದುಡ್ಡಿನಿಂದಲೆ ಆಗಿದ್ದು.... 2003 ರಲ್ಲಿ ಯೇ ನಮ್ಮ ಮನೆಯಲ್ಲಿ tv, ಗ್ಯಾಸ್, ಫೋನ್ ಇತ್ತು . ಆ ಸಮಯದಲ್ಲಿ ಅದು ಅಪರೂಪ. ವಜ್ರಾಂಗಿ ಯ ಜಾಗ ಸಣ್ಣದಾಯಿತು, ಎಂಬ ಕಾರಣಕ್ಕೆ ಆ ಜಾಗವನ್ನು ಕೊಟ್ಟು, 2005ರಲ್ಲಿ “ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ದೇರ್ಜಾಲು” ಎಂಬಲ್ಲಿ 6 ಎಕ್ರೆ ಜಾಗ ಖರೀದಿಸಿದೆವು... ಜಾಗ ಖರೀದಿ ಮಾಡಿದ ಸಮಯ ತಂದೆಯ ಸಂಬಳ ನಮಗೆ ಆಧಾರ ಆಗಿತ್ತು. ಆ ಕಾಲಕ್ಕೆ ತಂದೆಗೆ ಒಳ್ಳೆಯ ಸಂಬಳ ಸಿಗುತಿತ್ತು. ಜಾಗ ಖರೀದಿಸಲು ಮುಂಡ್ರ ಕಜೆ ಅಜ್ಜ ನವರ ಸಹಾಯ ಕೂಡ ಇದೆ... ತಂದೆ ದುಡಿಮೆ ಆವಾಗ ನಮಗೆ ಆನೆ ಬಲ ತಂದುಕೊಟ್ಟಿತ್ತು.. ಹಂತ ಹಂತವಾಗಿ ಜಾಗ ವನ್ನು ಅಭಿವೃದ್ಧಿ ಪಡಿಸಿದೆವು... ಮಧ್ಯಮ ವರ್ಗದ ಸು...
Comments