Whats app ಗ್ರೂಪಾಯಣ, ಗ್ರೂಪ್ ಒಂದು ಮೂರು ಬಾಗಿಲು?
Whats app ಗ್ರೂಪಾಯಣ...
Zukerberg ಈ whats app ನಲ್ಲಿ ಹೆಚ್ಚಿನ ಫೀಚರ್ ಸೇರಿಸೋದು ಖುಷಿ ವಿಚಾರ.ಆದ ಕಾರಣವೇ whats app ಇಷ್ಟು ಪಾಪ್ಯುಲರ್ ಆಗಲು ಕಾರಣ.ಪ್ರತಿಯೊಬ್ಬರ ಮೊಬೈಲ್ನಲ್ಲೂ news app, ಡಿಕ್ಷನರಿ,games ಇಲ್ಲದೇ ಇದ್ರೂ ಈ whats app ಅಂತೂ ಇದ್ದೆ ಇರುತ್ತದೆ. ಈಗೀಗ ಈ app ಡೀಫಾಲ್ಟ್ ಆಗಿ ಇನ್ಸ್ಟಾಲ್ ಆಗಿರುತ್ತದೆ. ಈ ಜೂಕರ್ ಬರ್ಗ್ whats app ಗ್ರೂಪ್ ಅಡ್ಮಿನ್ ಗಳಾಗಲು ಕೆಲವು ಕಂಡಿಷನ್ ಹಾಕಬೇಕು ಅಲ್ವಾ. ಇದರ ಜೊತೆ ಇನ್ನು ಕೆಲವು ಸೇರಿಸಲಿ ಇಲ್ಲದಿದ್ರೆ ಅರ್ಹತೆ ಇಲ್ಲದವ ಗ್ರೂಪ್ ತೆರೆದು ಸಾತ್ವಿಕರಿಗೆ ಬುದ್ದಿ ಹೇಳುವ ಪರಿಸ್ಥಿತಿ ಬರಬಹುದು ಅಲ್ವಾ.
1. ಅಡ್ಮಿನ್ ಗಳು ಯಾವುದೇ ಪೋಲಿಸ್ ಸ್ಟೇಷನ್ ಗಳಲ್ಲಿ ಕೇಸ್ ಹೊಂದಿರಬಾರದು.
2.ಸಿವಿಲ್ or ಕ್ರಿಮಿನಲ್ ಕೇಸ್ ಇರುವವರು ಅನರ್ಹರು
3.ಅಡ್ಮಿನ್ ಗಳು ಬ್ಯಾಂಕ್ ಗಳಲ್ಲಿ ಸಾಲ ತೆಗೆದು overdue ಆಗಿ auction ನೋಟಿಸ್ ವಗೈರೆ ಬಂದಿರಬಾರದು.(BANK FRAUD)
4. ಸಮಾಜದ ಸ್ವಾಸ್ಥ್ಯ ಹದಗೆಡಲು ಕಾರಣೀಕರ್ತನಾಗಿರಬಾರದು .
ಇಷ್ಟು T & C ಇಡಬೇಕು ರೀ... ಇಷ್ಟು ಅರ್ಹತೆ ಇಲ್ಲದೆ ಇದ್ದವರು whatsapp ಗ್ರೂಪ್ ನ ಸಾತ್ವಿಕ/ಹಿರಿಯ ಸದಸ್ಯರಿಗೆ ಬುದ್ಧಿವಾದ ಹೇಳಲೇ ಬಾರದು.. ಅವರಿಗೆ ಅರ್ಹತೆ ಇಲ್ಲ ಏನಂತೀರಿ..
ಈಗಿನ WHATS APP ಗ್ರೂಪ್ ಗಳಲ್ಲಿ ಗ್ರೂಪ್ ನ ಒಳಗೆ ಹಲವು ಗ್ರೂಪ್ ಗಳಿರುತ್ತವೆ. ಅದರಲ್ಲಿ ಕೂಡ ಹಲವು ವಿಧದ ಗಳು..
1. ಬೇರೆ ಬೇರೆ ಪಕ್ಷದ ಜನರು /ಕಾರ್ಯಕರ್ತ ರು ಒಂದು ಗ್ರೂಪ್ ನಲ್ಲಿದ್ದು ಕೊಂಡು ಅಲ್ಲೇ ಒಳಗೊಳಗೇ ಪ್ರತ್ಯೇಕ ಪಕ್ಷದ ಗ್ರೂಪ್.
2. ಅಡ್ಮಿನ್ ಗಳಿಗೆ ಸಹಾಯ ಮಾಡಿದ ತಂಡ ಮತ್ತೊಂದು ಮಾಡದೆ ಇರುವ ತಂಡ..
3. ಅಡ್ಮಿನ್ ನನ್ನು ಆರ್ಥಿಕ ವಾಗಿ ಮೇಲಕ್ಕೆ ಎತ್ತಲು ಅಹರ್ನಿಶಿ ದುಡಿಯುವ ತಂಡ ಮತ್ತೊಂದು ತನ್ನ ಪಾಡಿಗೆ ಇರುವ ತಂಡ
4. ಧರ್ಮದ ಪರ ಹೋರಾಡುವ ತಂಡ, ಧರ್ಮದ ಬಗ್ಗೆ ನಿರಾಸಕ್ತಿ ಇದ್ದು ಅದ್ರ ಅವಹೇಳನ ಮಾಡುವ ತಂಡ
5. ಮನೆ ಮನೆ ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡು ಮಾತಾಡುತ್ತಿರುವ ತಂಡ, ಯಾವುದರ ಸುದ್ದಿಗೂ ಹೋಗದೆ ತನ್ನ ಪಾಡಿಗೆ ಇರುವ ತಂಡ
6. ಗ್ರೂಪ್ ನಲ್ಲಿ ಆಕ್ಟಿವ್ (ಇದರಲ್ಲೂ ಕೆಲವು ವಿಧ ಇದೆ 1. ಆಕ್ಟಿವ್ 2. ಹೈಪರ್ ಆ್ಯಕ್ಟಿವ್ 3. ಓವರ್ ಆಕ್ಟಿವ್ 4. neutral) ಮತ್ತು ಆಕ್ಟಿವ್ ಇಲ್ಲದೆ ಗ್ರೂಪ್ ನಿಂದಾ ಇತ್ರ ಗ್ರೂಪ್ ಗೆ forward ಮಾಡುವ ತಂಡ
7. ಅಡ್ಮಿನ್ ರವರಿಗೆ ಹತ್ತಿರವಾದ ಮೆಂಬರ್ ಗಳು ಮತ್ತು ಅಡ್ಮಿನ್ ನಿಂದಾ ದೂರ ವಿರುವ ಮೆಂಬರ್ ಗಳು .
ಇನ್ನು ಹಲವು ಕೆಲವು ಇರಬಹುದು. ನಾ ಗಮನಿಸಿದಂತೆ ಇಷ್ಟು.10 ವರ್ಷ ಗಳಿಂದ whats app ಗ್ರೂಪ್ ನಲ್ಲಿರುವುದರಿ0ದ ನಾನು ಗಮನಿಸಿದ್ದು ಇಷ್ಟು. ಇದು ಯಾರನ್ನು ಗುರಿಯಾಗಿಸಿ ಬರೆದ ಬರಹ ಅಲ್ಲ. ಕೆಲವು ವಾಕ್ಯಗಳು ಕೆಲವರಿಗೆ ನನಗೆ ಬರೆದಿದ್ದು ಅನಿಸ ಬಹುದು. ಅದಕ್ಕೆ ನಾನು ಹೊಣೆಗಾರನಲ್ಲ.
Whats app ನಲ್ಲಿ ಕೂಡ ಪ್ರಮುಖ ಮಾಹಿತಿ ತಿಳಿಸಿ, ತಪ್ಪನ್ನು ತಿದ್ದುವ, ಧರ್ಮದ ಬಗ್ಗೆ ತಿಳಿ ಹೇಳುವ, ಧರ್ಮ ದ ಬಗೆಗಿನ ಸಂದೇಶ ಪಸರಿಸುವ, ಆರ್ಥಿಕವಾಗಿ ಸಹಾಯ ಮಾಡುವ, ರಕ್ತ ದಾನಕ್ಕೆ ಉತ್ತೇಜನ ನೀಡುವ ಗ್ರೂಪ್ ಗಳು ಇವೆ. ಅದರ ಅಡ್ಮಿನ್ ಗಳು ಬುದ್ಧಿವಂತರು/ತಿಳುವಳಿಕೆ ಉಳ್ಳವರು, ಉನ್ನತ ಶಿಕ್ಷಣ ಪಡೆದವರು/ವಿದ್ಯಾವಂತರು ಆಗಿರುತ್ತಾರೆ... ಯಾರ ಮುಲಾಜಿಗೂ ಅವರು ಒಳಗಾಗದೆ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಾ ಇರುತ್ತದೆ ...
ಕೊನೆಯದಾಗಿ meta ಕ್ಕೆ ಧನ್ಯವಾದ ತಿಳಿಸಿ ಈ ಬರಹ ಕ್ಕೆ ಕೊನೆಯ ಬಿಂದು ಇಡುತ್ತಿದ್ದೇನೆ.
Comments